Co- operative society vs Banks: ಕೋ ಆಪರೇಟಿವ್ ಬ್ಯಾಂಕ್, ಸೊಸೈಟಿಗಳಲ್ಲಿ FD ಮಾಡುವ ಮುನ್ನ.....

Finance Minister
0

Author- Arun Killuru

Co- operative society vs Banks  ಸಾಕಷ್ಟು ಜನರು ಹೆಚ್ಚಿನ ಬಡ್ಡಿಯ ಆಸೆಗೆ ಒಳಪಟ್ಟು ಕೋ ಆಪರೇಟಿವ್ ಬ್ಯಾಂಕ್, ಸೊಸೈಟಿಗಳಲ್ಲಿ ಹಣ ತೊಡಗಿಸಿ ಬಳಿಕ ವಂಚನೆ ಆಗಿರುವ ಬಗ್ಗೆ ದೂರು ನೀಡಿರುವ ವರದಿಗಳು ಪತ್ರಿಕೆಗಳಲ್ಲಿ ಆಗಾಗ ಬರುತ್ತಿರುತ್ತವೆ. ಲಕ್ಷಾಂತರ ರೂ. ಡೆಪಾಸಿಟ್ ಮಾಡಿ ಹಣ ಕಳೆದುಕೊಂಡು ಬಳಿಕ ಅದನ್ನು ಕಳೆದುಕೊಂಡು ಕೋರ್ಟ್, ಕಚೇರಿ ಎಂದು ಒದ್ದಾಡುವುದು ಪತ್ರಿಕೆಯಲ್ಲಿ ವರದಿ ಆಗುತ್ತಾ ಇರುತ್ತದೆ   ಆಪರೇಟಿವ್ ಸೊಸೈಟಿಗಳಲ್ಲಿ ಎಫ್ ಡಿ ಮಾಡುವುದು ಎಷ್ಟು ಸುರಕ್ಷಿತ ? fd ಮಾಡುವಾಗ ಯಾವ ಎಚ್ಚರಿಕೆ ವಹಿಸಬೇಕು ಎನ್ನುವ ವಿಚಾರವನ್ನು ಈ ವಿಡಿಯೋದಲ್ಲಿ ತಿಳಿಸುತ್ತಿದ್ದೇವೆ.


ಮೊದಲನೆಯದಾಗಿ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ ಎನ್ನುವ ಆಸೆಗೆ ಬಿದ್ದು ಎಂಡಿ ಮಾಡುವ ಮುನ್ನ ಯಾವುದೇ ಗ್ರಾಹಕರು ಆರ್ ಬಿ ಐ ಯ ಮೇಲುಸ್ತುವಾರಿಗೇ ಈ ಸೊಸೈಟಿ ಗಳು ಒಳಪಟ್ಟಿವೆ ಎನ್ನುವುದನ್ನು ಪರಿಶೀಲನೆ ಮಾಡಬೇಕು. ಹಲವು ಕೋ ಆಪರೇಟಿವ್ ಸೊಸೈಟಿಗಳು, ಕೋ ಆಪರೇಟಿವ್ ಬ್ಯಾಂಕ್ ಪದವನ್ನು ಬಳಕೆ ಮಾಡುತ್ತವೆ. ಈ ಕಾರಣದಿಂದ ಗ್ರಾಹಕರು ಈ ಬಗ್ಗೆ ಎಚ್ಚರ ವಹಿಸಬೇಕು.

ಕೋ ಆಪರೇಟಿವ್ ಬ್ಯಾಂಕ್ ಗಳು deposit insurance and credit guarantee corporation ಇದರ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಹಣವನ್ನು ಡೆಪಾಸಿಟ್ ಮಾಡಿದಾಗ ಷೆಡ್ಯೂಲ್ ಕಮರ್ಷಿಯಲ್ ಬ್ಯಾಂಕುಗಳ ರೀತಿ ಸಂಸ್ಥೆ ಮುಚ್ಚಿ ಹೋದಾಗ ಗರಿಷ್ಠ ಗ್ರಾಹಕರಿಗೆ 5 ಲಕ್ಷ  ರೂಪಾಯಿ ಖಾತರಿ ಹಣ ಸಿಗುತ್ತದೆ.

ಒಂದು ವೇಳೆ  RBI ಮೇಲುಸ್ತುವಾರಿಗೆ ಒಳಪಡದ ಸಹಕಾರಿ ಸಂಘದಲ್ಲಿ ಹಣ ಎಫ್ ಡಿ ಮಾಡಿದಾಗ, ವಿಮೆಗೆ ಅರ್ಹತೆ ಪಡೆಯದೆ ಇರುವ ಕಾರಣ, ಸೊಸೈಟಿ ಮುಚ್ಚಿ ಹೋದಾಗ ಯಾವುದೇ ಹಣ ಸಿಗುವುದಿಲ್ಲ. ಆದರೆ ಒಂದು ವೇಳೆ ಕೋ ಆಪರೇಟಿವ್ ಬ್ಯಾಂಕ್ ಮುಚ್ಚಿ ಹೋದಲ್ಲಿ ಇಲ್ಲಿ ಹೂಡಿಕೆ ಮಾಡಿದ FD ನ್ನು ಕಮರ್ಷಿಯಲ್ ಬ್ಯಾಂಕ್ ಡೆಪಾಸಿಟಿ ನಷ್ಟು ಸುಲಭವಾಗಿ ತೆಗೆಯಲು ಆಗುವುದಿಲ್ಲ. deposit insurance and credit guarantee corporation ಡಿಐಸಿಜಿಸಿ ನಿಯಮದ ಪ್ರಕಾರ ಡಿಪೋಸಿಟ್ ಇನ್ಸೂರೆನ್ಸ್ ಕ್ಲೈಮ್ ಮಾಡಲು ಶೆಡ್ಯೂಲ್ ಬ್ಯಾಂಕ್ ಗಿಂತ ಹೆಚ್ಚಿನ ಸಮಯ ಹಿಡಿಯುತ್ತದೆ.

Uploading: 529313 of 529313 bytes uploaded.



ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರ:

Co operative Bank RBI ವ್ಯಾಪ್ತಿಗೆ ಒಳಪಟ್ಟರೂ, ಆರ್ಥಿಕ ತಜ್ಞರು ಹೇಳುವ ಪ್ರಕಾರ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಅಧ್ಯಯನ ಮಾಡುವುದು ಮುಖ್ಯ.


ಮೊದಲನೆಯದಾಗಿ CRISIL, ICRA, CARE rating ಪರಿಶೀಲನೆ ಮಾಡಬೇಕು.

ಎರಡನೆಯದಾಗಿ ಬ್ಯಾಂಕುಗಳ ವೆಬ್ಸೈಟ್ನಲ್ಲಿ ಫೈನಾನ್ಸಿಯಲ್ ಸ್ಟೇಟ್ಮೆಂಟುಗಳನ್ನು ಪರಿಶೀಲನೆ ಮಾಡಬೇಕು. 

ಆರ್‌ಬಿಐ ನಿಯಮದ ಪ್ರಕಾರ CAR (capital adequacy ratio) ನಿರ್ವಹಣೆ ಮಾಡಲಾಗಿದೆಯೇ ಎಂದು ಅಧ್ಯಯನ ಮಾಡಬೇಕು. 

RBI ಕೊಆಪರೇಟ್ ಸೊಸೈಟಿಗಳಿಗೆ 12 ಶೇಕಡಷ್ಟು ಸಿಎಆರ್ ನಿಗದಿ ಮಾಡಿದೆ. CAR ಹೆಚ್ಚಾದಲ್ಲಿ ಹಣಕಾಸು ಸಂಸ್ಥೆ ಸುರಕ್ಷತೆ ಹೊಂದಿದೆ ಎಂದು ಅಂದಾಜಿಸಲಾಗುತ್ತದೆ.

ಅಂತೆಯೇ Current and savings account (CASA) ರೇಶಿಯೋ ಹೆಚ್ಚಾಗಿರುವುದು cooperative ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಲು ಒಂದು ಉತ್ತಮ ಮಾನದಂಡ ಆಗಿದೆ. ಅಂತೆಯೇ NPA 8ರಿಂದ 10% ರಷ್ಟು ಇದ್ದಲ್ಲಿ ಅಂತ ಕಡೆ ಡೆಪಾಸಿಟ್ ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ.

ಕೋ ಆಪರೇಟ್ ಸೊಸೈಟಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುವುದು ವಹಿಸಬೇಕು. ವಹಿವಾಟು ಬಗ್ಗೆ ನಿಗಾ ವಹಿಸಬೇಕು. ಅವರ ವ್ಯವಹಾರ, ಸಾಲ ಯಾರಿಗೆ ನೀಡುತ್ತಾರೆ ಎನ್ನುವ ಬಗ್ಗೆ ಗಮನಿಸಬೇಕು. ಇಲ್ಲವಾದಲ್ಲಿ FD ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)