ಹಣದ ಹೊಳೆಯನ್ನೇ ಹರಿಸುವ ಉದ್ಯೋಗಗಳು - ಈ ಕೆಲಸಗಳಿಗೆ ಟ್ರೈ ಮಾಡಿ ಕೈ ತುಂಬಾ ಹಣ ಎಣಿಸಿ!!

Finance Minister
0

Author: Arun killuru

ಕೈ ತುಂಬಾ ಸಂಬಳ ಕೊಡುವ ಕೆಲಸವನ್ನು ಮಾಡಲು ಎಲ್ಲರೂ ಇಷ್ಟ ಪಡುತ್ತಾರೆ. ಉತ್ತಮ ಸಂಬಳ ಬರುವ ಉದ್ಯೋಗ ಇದ್ದರೆ ಅಂಥವರಿಗೆ ಇಂದು ಸಮಾಜದಲ್ಲಿ ರಾಜ ಮರ್ಯಾದೆ ಸಿಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.



ಹಲವು ವರ್ಷಗಳ ಕಾಲ ಕಲಿಯಲು ಸಾಕಷ್ಟು ಸಮಯ, ಹಣವನ್ನು ಖರ್ಚು ಮಾಡಿದ ಬಳಿಕ ಎಲ್ಲರೂ ಉತ್ತಮವಾದ ಕೆಲಸವನ್ನು ಹಿಡಿಯಲು ಬಯಸುತ್ತಾರೆ. ಸೂಕ್ತ ಮಾರ್ಗದರ್ಶನ, ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಉತ್ತಮ ಕೆಲಸ ಸಿಗುತ್ತದೆ ಎನ್ನುವ ಬಗ್ಗೆ ಅರಿವಿದ್ದರೆ ಕೈತುಂಬ ಲಕ್ಷಾಂತರ ಹಣವನ್ನು ಪ್ರತಿ ತಿಂಗಳು ಎಣಿಸಬಹುದು. ಕೆಲವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಉದ್ಯೋಗಾಂಕ್ಷಿಗಳಿಗೆ ಉಪಯೋಗ ಆಗಲಿ ಎನ್ನುವ ನಿಟ್ಟಿನಲ್ಲಿ ಈ ವಿಡಿಯೋದ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಬಳ ನೀಡುವ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. 

1. ಡಾಕ್ಟರ್ ಗಳು ಮತ್ತು ಸರ್ಜನ್ ಗಳು:

ಭಾರತದಲ್ಲಿ ಆರೋಗ್ಯ ಕ್ಷೇತ್ರ ಅತಿಹೆಚ್ಚಿನ ಸಂಬಳವನ್ನು ನೀಡುತ್ತಿದೆ. ನುರಿತ ವೈದ್ಯರು ಹಾಗೂ ಸರ್ಜನ್ ಗಳಿಗೆ ಸಾಕಷ್ಟು ಬೇಡಿಕೆ ಇದೆ. ವೈದ್ಯರು ಹಾಗೂ ಸರ್ಜನ್ ಗಳು ಅವರ ಕಲಿಕೆಯ ವಿಭಾಗದ ಆಧಾರದಲ್ಲಿ ಉತ್ತಮವಾದ ಸಂಬಳವನ್ನು ಪಡೆಯುತ್ತಾರೆ.


ಭಾರತದಲ್ಲಿ ವೈದ್ಯಕೀಯ ವೃತ್ತಿಪರರ ಸರಾಸರಿ ವಾರ್ಷಿಕ ಸಂಬಳ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.  ವೈದ್ಯರು ಹಾಗೂ ಸರ್ಜನ್ ಗಳಲ್ಲಿ ಶೇಕಡ 25ಕ್ಕಿಂತ ಹೆಚ್ಚು ನುರಿತ ತಜ್ಞರು ವಾರ್ಷಿಕವಾಗಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.


Top employers:

AIIMS (All India Institute of Medical Sciences)

Fortis

Apollo

Max

Columbia Asia


2. ಡೇಟಾ ಸೈಂಟಿಸ್ಟ್

ಕಂಪ್ಯೂಟರ್ ಸೈನ್ಸ್, ಪ್ರೋಗ್ರಾಮಿಂಗ್, ಸ್ಟಾಟಿಸ್ಟಿಕ್ಸ್, ಮ್ಯಾಥಮೆಟಿಕ್ಸ್, ಅನಾಲಿಟಿಕ್ಸ್ ಕ್ಷೇತ್ರದಲ್ಲಿ  ಉತ್ತಮ ಫೌಂಡೇಶನ್ ಇರುವವರಿಗೆ ಡೇಟಾ ಸೈಂಟಿಸ್ಟ್ ಕ್ಷೇತ್ರದಲ್ಲಿ ಉತ್ತಮ ಸಂಬಳ ಸಿಗುತ್ತದೆ. 

ಡೇಟಾ ಸೈಂಟಿಸ್ಟ್ ಗಳು ವಾರ್ಷಿಕವಾಗಿ ಸರಾಸರಿ 11 ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ. ಅನುಭವಿ ಡೇಟಾ ಸೈಂಟಿಸ್ಟುಗಳು ವಾರ್ಷಿಕವಾಗಿ 60 ರಿಂದ 70 ಲಕ್ಷ ರೂಪಾಯಿವರೆಗೂ ಸಂಬಳ ಪಡೆಯಬಲ್ಲರು.



Top Employers:

Amazon

Procter & Gamble

Walmart Labs

GreyAtom


3. ಮಿಷಿನ್ ಲರ್ನಿಂಗ್ ಎಕ್ಸ್ಪರ್ಟ್ಸ್

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದ ಬ್ರಾಂಚ್ ಆಗಿರುವ ಮಿಷಿನ್ ಲರ್ನಿಂಗ್ ಈಗ ಸಾಕಷ್ಟು ಬೂಮಿಂಗ್ ಆಗುತ್ತಿರುವ ಕ್ಷೇತ್ರ ಆಗಿದೆ. ಮೆಷಿನ್ ಲರ್ನಿಂಗ್ ಇಂಜಿನಿಯರ್ ಗಳು ವ್ಯಾಪಾರಕ್ಕೆ ಅನುಕೂಲವಾದ ML ಪ್ರೋಗ್ರಾಮ್ಸ್ ಮತ್ತು ಆಲ್ಗೊರಿದಮ್ಸ್ ಗಳನ್ನು ಡೆವಲಪ್ ಮಾಡುತ್ತಾರೆ.ಈ ಕ್ಷೇತ್ರ  ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಣೆಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮಿಷಿನ್ ಲರ್ನಿಂಗ್ ಇಂಜಿನಿಯರ್ ವಾರ್ಷಿಕವಾಗಿ ಅಂದಾಜು 7 ಲಕ್ಷ ರೂಪಾಯಿಯನ್ನು ಸರಾಸರಿ ಪಡೆಯುತ್ತಾರೆ. ಅನುಭವಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ವಾರ್ಷಿಕವಾಗಿ 20 ಲಕ್ಷ ರೂಪಾಯಿ ವರೆಗೂ ಸಂಬಳ ಪಡೆಯಬಲ್ಲರು.



Top Employers:

Accenture

IBM

ITC Infotech

Zycus

Quantiphi



4. ಬ್ಲಾಕ್ ಚೈನ್ ಡೆವಲಪರ್

ಕರೆನ್ಸಿ ವರ್ಗಾವಣೆ, ಇಂಟರ್ನೆಟ್ ಕನೆಕ್ಟಿವಿಟಿ, ಡೇಟಾ ಸೆಕ್ಯೂರಿಟಿ, ಡೇಟಾ ಹ್ಯಾಂಡ್ಲಿಂಗ್ ಕೆಲಸವನ್ನು ಬ್ಲಾಕ್ ಚೈನ್ ಟೆಕ್ನಾಲಜಿ ಮೂಲಕ ಮಾಡಲಾಗುತ್ತದೆ. 

ಕಂಪ್ಯೂಟರ್ ಸೈನ್ಸ್ ಮ್ಯಾಥೆಮ್ಯಾಟಿಕ್ಸ್, ಸ್ಟಾಟಿಸ್ಟಿಕ್ಸ್ ಹಿನ್ನೆಲೆ ಇರುವ ಐಟಿ ವೃತ್ತಿಪರರು ಈ ಕ್ಷೇತ್ರದಲ್ಲಿ ಕೆಲಸ ಮಾಡಬಹುದು.

ಸರಾಸರಿ ವಾರ್ಷಿಕ ಸಂಬಳ 8 ಲಕ್ಷ ಇದೆ. ಅನುಭವಿವೃತ್ತಿ ಪರರಿಗೆ ವಾರ್ಷಿಕವಾಗಿ 45 ಲಕ್ಷ ರೂಪಾಯಿಯನ್ನು ಕೂಡ ನೀಡಲಾಗುತ್ತದೆ.



Top Employers:

Auxesis

Signzy

Primchain

SoluLab

Sofocle

OpenXcell

Elemential

MindDeft


5. ಫುಲ್ ಸ್ಟ್ಯಾಕ್ ಸಾಫ್ಟ್ವೇರ್ ಡೆವಲಪರ್

ಈ ಕ್ಷೇತ್ರಕ್ಕೆ ಸಾಕಷ್ಟು ಬೇಡಿಕೆ ಇದೆ. ಈ ಕ್ಷೇತ್ರದ ಸಾಫ್ಟ್ವೇರ್ ಇಂಜಿನಿಯರ್ ಗಳು ವೆಬ್ ಸೈಟ್ ಬಿಲ್ಡ್ ಮಾಡುವ ಕೆಲಸ ಮಾಡುತ್ತಾರೆ. ಸಾಫ್ಟ್ವೇರ್ ಅಭಿವೃದ್ಧಿಪಡಿಸುತ್ತಾರೆ. ಐಟಿ ಕ್ಷೇತ್ರದ ಪದವೀಧರರು ಕ್ಷೇತ್ರದಲ್ಲಿ ತರಬೇತಿ ಪಡೆದು ಉತ್ತಮ ಉದ್ಯೋಗವನ್ನು ಹಿಡಿಯಬಹುದು.

ವಾರ್ಷಿಕವಾಗಿ ಇಲ್ಲಿ ಹೊಸಬರಿಗೆ ನಾಲ್ಕು ಲಕ್ಷದವರೆಗೆ ವಾರ್ಷಿಕ ಸಂಬಳ ನೀಡಲಾಗುತ್ತದೆ. ಉತ್ತಮ ಅನುಭವಿಗಳಿಗೆ ವಾರ್ಷಿಕವಾಗಿ 14 ಲಕ್ಷ ವರೆಗೂ ಪ್ಯಾಕೇಜ್ ಸಿಗುತ್ತದೆ.



Top Employers:

Barclays

Dell

IBM

Siemens

E2logy

Simpalm

ChromeInfotech


6. ಪ್ರಾಡಕ್ಟ್ ಮ್ಯಾನೇಜ್ ಮೆಂಟ್

ವಿವಿಧ ಬಗೆಯ ಪ್ರಾಡಕ್ಟ್ ಗಳ ಅಭಿವೃದ್ಧಿ, ಮಾರ್ಕೆಟಿಂಗ್ ಮಾಡುವ ಜವಾಬ್ದಾರಿಯನ್ನು ಪ್ರಾಡಕ್ಟ್ ಮ್ಯಾನೇಜರ್ ಗಳು ಹೊಂದಿರುತ್ತಾರೆ. ಈ ಬಗ್ಗೆ ತರಬೇತಿ ಪಡೆಯುವ ಮೂಲಕ ಪ್ರೋಡಕ್ಟ್ ಮ್ಯಾನೇಜರ್ ಆಗಿ ಕೆಲಸವನ್ನು ಪಡೆಯಬಹುದು.

ಪ್ರಾಡಕ್ಟ್ ಮ್ಯಾನೇಜರ್ಗಳಿಗೆ ಸರಾಸರಿ ವಾರ್ಷಿಕವಾಗಿ 14 ಲಕ್ಷ ರೂಪಾಯಿಯನ್ನು ಸಂಬಳವಾಗಿ ನೀಡಲಾಗುತ್ತದೆ. ಆರಂಭಿಕ ಉದ್ಯೋಗಿಗಳಿಗೆ ಏಳರಿಂದ ಎಂಟು ಲಕ್ಷ ರೂಪಾಯಿ ವಾರ್ಷಿಕವಾಗಿ ಸಿಗುತ್ತದೆ. ಈ ಕ್ಷೇತ್ರದ ಅನುಭವಿ ಉದ್ಯೋಗಿಗಳು ವಾರ್ಷಿಕವಾಗಿ 26 ಲಕ್ಷ ರೂಪಾಯಿವರೆಗೂ ಸಂಬಳವನ್ನು ಪಡೆಯಬಹುದು.



Top Employers:

Amazon

Google

Microsoft

Flipkart

Salesforce

Uber

Ola


7. ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್

ಇವರು ಯಾವುದೇ ಸಂಸ್ಥೆಯನ್ನು ಇನ್ನಷ್ಟು ಪ್ರಗತಿಯ ಕಡೆಯ ಕಡೆಗೆ ಕರೆದುಕೊಂಡು ಹೋಗುವಲ್ಲಿ ರೂಪುರೇಷೆಯನ್ನು ತಯಾರಿಸುತ್ತಾರೆ. 

ಆಸಕ್ತ ಅಭ್ಯರ್ಥಿಗಳು ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಎಕನಾಮಿಕ್ಸ್, ಫೈನಾನ್ಸ್, ಅಕೌಂಟಿಂಗ್, ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪದವಿ ಪಡೆದ ಬಳಿಕ ಎಂಬಿಎ ಮಾಡಿ ಈ ಕೆಲಸಕ್ಕೆ ಸೇರ್ಪಡೆಯಾಗಬಹುದು. 

ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಗಳಿಗೆ ವಾರ್ಷಿಕವಾಗಿ ಸರಾಸರಿ 11 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುವುದು. ಆರಂಭಿಕ ಸಂಬಳ ಆರರಿಂದ ಏಳು ಲಕ್ಷ ರೂಪಾಯಿ ವಾರ್ಷಿಕವಾಗಿ ಇರುತ್ತದೆ. ಅನುಭವಿಗಳು 34 ಲಕ್ಷ ರೂಪಾಯಿವರೆಗೂ ವಾರ್ಷಿಕವಾಗಿ ಸಂಬಳವನ್ನು ಪಡೆಯಬಹುದಾಗಿದೆ.



Top Employers:

KPMG

PwC

McKinsey & Co.

Deloitte

Ernst & Young

Accenture



8. ಇನ್ವೆಸ್ಟ್ಮೆಂಟ್ ಬ್ಯಾಂಕರ್

ಇವರು ಹಣ ಹೂಡಿಕೆ ಮಾಡಲು ಉದ್ದೇಶಿಸಿರುವ ಗ್ರಾಹಕರಿಗೆ ಉತ್ತಮವಾಗಿ ರಿಟರ್ನ್ಸ್ ನೀಡುವ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಫೈನಾನ್ಸಿನಲ್ಲಿ ವಿಶೇಷ ಪರಿಣಿತಿಯನ್ನು ಪಡೆದವರಿಗೆ ಈ ಉದ್ಯೋಗ ಬಹಳ ಉತ್ತಮವಾದದ್ದು.

ಆರಂಭಿಕ ಸಂಬಳ ಹತ್ತರಿಂದ ಹನ್ನೆರಡು ಲಕ್ಷ ರೂಪಾಯಿ ಇರುತ್ತದೆ. ಅನುಭವಿಗಳು ಈ ಉದ್ಯೋಗದಲ್ಲಿ ವಾರ್ಷಿಕವಾಗಿ 30 ಲಕ್ಷ ರೂಪಾಯಿ ವರೆಗೂ ಸಂಬಳವನ್ನು ಪಡೆಯಬಹುದು.



Top Employers:

Citibank

Deutsche Bank

HSBC

Goldman Sachs

JP Morgan Chase


9. ಚಾರ್ಟೆಡ್ ಅಕೌಂಟೆಂಟ್

ಸಿಎ ಗಳು ಪ್ರತಿಯೊಂದು ಕಂಪನಿಗಳಿಗೆ ಲೆಕ್ಕಾಚಾರಕ್ಕಾಗಿ, ಹಣಕಾಸು ಸಲಹೆ ನೀಡಲು, ಹಣವನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಅನಿವಾರ್ಯ ಆಗಿರುತ್ತಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸಿಎ ಗಳಿಗೆ ಬೇಡಿಕೆ ಹೆಚ್ಚುತ್ತಲ್ಲೇ ಇದೆ.

ಕಾಮರ್ಸ್ ಪದವೀಧರರು ಇನ್ಸಿಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ ಎ ಕೋರ್ಸ್ ಉತ್ತೀರ್ಣ ಆದ ಬಳಿಕ ವೃತ್ತಿಪರ ಸಿಎ ಆಗಿ ಕೆಲಸವನ್ನು ಮಾಡಬಹುದು.

ಸಿಎ ಗಳು ವಾರ್ಷಿಕವಾಗಿ ಆರಂಭಿಕ ಆರರಿಂದ ಏಳು ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿದಂತೆ ಅವರು ವಾರ್ಷಿಕವಾಗಿ 30 ಲಕ್ಷ ರೂಪಾಯಿಯವರೆಗೂ ಸಂಬಳವನ್ನು ಪಡೆಯಬಹುದಾಗಿದೆ. 



Top Employers:

Standard Chartered

Ernst & Young

Deloitte

KPMG

BDO International

Grant Thornton International


10. ಮಾರ್ಕೆಟಿಂಗ್ ಮ್ಯಾನೇಜರ್

ಕಂಪನಿಗಳು ಹೆಚ್ಚಿನ ಲಾಭವನ್ನ ಪಡೆದು ಗ್ರಾಹಕರ ಮನಸ್ಸನ್ನು ಗೆಲ್ಲುವ ನಟ್ಟಿನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಹೊಂದಿರುವುದು ಈ ಕೆಲಸ ಮಾಡಲು ಕನಿಷ್ಠ ಅರ್ಹತೆಯಾಗಿದೆ.

ಈ ಉದ್ಯೋಗದ ಸರಾಸರಿ ಸಂಬಳ ವಾರ್ಷಿಕ 7 ಲಕ್ಷ ರೂಪಾಯಿ ಆಗಿರುತ್ತದೆ. ಆರಂಭಿಕ ವೇತನ 4 ರಿಂದ 6 ಲಕ್ಷ ರೂಪಾಯಿ ಇರುತ್ತದೆ. ಸೀನಿಯರ್ ಹಂತದಲ್ಲಿ ಈ ವೇತನ ವಾರ್ಷಿಕ 22 ಲಕ್ಷ ರೂಪಾಯಿವರೆಗೂ ತಲುಪುತ್ತದೆ.




Top Employers:

IBM

Amazon

Flipkart

TCS

Tata Motors


ಇಲ್ಲಿ ನೀಡಿರುವ ಮಾಹಿತಿ ಈಗ ತಾನೆ ಉದ್ಯೋಗ ಹುಡುಕುತ್ತಿರುವವರಿಗೆ, ಈಗಾಗಲೇ ಕೆಲಸ ಮಾಡುತ್ತಿದ್ದು ಬೇರೆ  ಉತ್ತಮ ಸಂಬಳದ ಕೆಲಸ ಎದುರು ನೋಡುವವರಿಗೆ, ತಮ್ಮ ಮಕ್ಕಳನ್ನು ಯಾವ ಕ್ಷೇತ್ರದಲ್ಲಿ ಓದಿಸಬೇಕು ಎನ್ನುವ ಕನಸು ಹೊತ್ತಿರುವ ಪೋಷಕರಿಗೆ ಉಪಯುಕ್ತ ಆಗಬಲ್ಲದು. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ಅಗತ್ಯವಾದ ಪೂರ್ವ ಸಿದ್ಧತೆಯನ್ನು ಮಾಡಿದರೆ ನಿಮ್ಮ ಕನಸಿನ ಉತ್ತಮ ಸಂಬಳದ ಕೆಲಸವನ್ನು ಹಿಡಿಯುವುದು ಕಷ್ಟವಲ್ಲ. 



ಈ ವಿಡಿಯೋವನ್ನು ನಿಮ್ಮ ಸ್ನೇಹಿತರು, ಸಂಬಂಧಿಕರ ಜೊತೆ ಹಂಚಿಕೊಳ್ಳಿ. ಇದರಿಂದ ಉತ್ತಮ ಉದ್ಯೋಗ ಬಯಸುವ ಒಂದಷ್ಟು ಜನರಿಗೆ ಉಪಯುಕ್ತ ಮಾಹಿತಿ ಸಿಗಬಹುದು. 

Tags:

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)