Instant personal loan apps : ಸಾಲ ಪಡೆಯುವಾಗ ಇರಲಿ ಎಚ್ಚರ!

Finance Minister
0

 ತಕ್ಷಣಕ್ಕೆ ಸಾಲ ಸಿಗಬೇಕು ಎನ್ನುವವರಿಗೆ ತಟ್ಟನೆ ಪಡೆಯುವುದು ಇನ್ಸ್ಟಂಟ್ ಪರ್ಸನಲ್ ಲೋನ್ ಆಪ್ಸ್. ಯಾವುದೇ ದಾಖಲೆ ಕೇಳದ, ಕ್ಷಣಮಾತ್ರದಲ್ಲಿ ಸಾಲವನ್ನು ನೀಡುವ ಈ ಆ್ಯಪ್ ಗಳು ತುರ್ತಾಗಿ ಬೇಕಾದ ಹಣದ ಅಗತ್ಯವನ್ನು ಪೂರೈಸಬಲ್ಲದು ಎಂದು ಹಲವರು ಯೋಚಿಸುತ್ತಾರೆ. ಆದರೆ ಈ ರೀತಿಯ ಇನ್ಸ್ಟಂಟ್ ಪರ್ಸನಲ್ ಲೋನ್ ಆಪ್ಸ್ ಗಳು ಹಲವಾರು ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡುವ ಜೊತೆಗೆ ಪ್ರಾಣಕ್ಕೂ ಸಂಚಕಾರ ತರಬಲ್ಲದು ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ.


 ಪ್ಲೇ ಸ್ಟೋರ್ ನಲ್ಲಿ ಸಿಗುವ ಇನ್ಸ್ತಂಟ್ ಪರ್ಸನಲ್ ಲೋನ್ ಆಪ್ ಗಳನ್ನು ಹಲವರು ಡೌನ್ಲೋಡ್ ಮಾಡಿಕೊಂಡು ಸಾಲ ಪಡೆಯುತ್ತಾರೆ. ಸಾಲ ಪಡೆದ ಕ್ಷಣದಿಂದಲೇ ಇಂತವರು ಸಮಸ್ಯೆಯನ್ನು ಎದುರಿಸುತ್ತಾರೆ ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ.


ಇನ್ಸ್ಟಂಟ್ ಆನ್ ಲೈನ್ ಲೋನ್ ಆ್ಯಪ್ ಗಳು ಹೇಗೆ ಕೆಲಸ ಮಾಡುತ್ತವೆ?:


ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಒಳಪಡುವ ಇನ್ಸ್ಟಂಟ್ ಪರ್ಸನಲ್ ಲೋನ್ free app ಗಳು ಸಾಲಗಾರರಿಂದ ಯಾವುದೇ ದಾಖಲೆ, ಸಹಿ ಪೇಪರ್ ವರ್ಕ್ಗಳನ್ನು ಕೇಳುವುದಿಲ್ಲ. ಕ್ಷಣಮಾತ್ರದಲ್ಲಿ ಸಾಲವನ್ನು ನೀಡುವ ಈ ವ್ಯವಸ್ಥೆ ಆರ್‌ಬಿಐಯ ಯಾವುದೇ ನಿಯಮಾವಳಿಯನ್ನು ಪಾಲನೆ ಮಾಡುವುದಿಲ್ಲ. ಇವರು ಸಾಲ ಮರುಪಾವತಿಗಾಗಿ ಮಾನಸಿಕ ಅನೈತಿಕ ಎನಿಸುವ ರೀತಿಯಲ್ಲಿ ಕಿರುಕುಳ ನೀಡುವ ಜೊತೆಗೆ ಜೀವ ಹಾನಿ ಉಂಟು ಮಾಡಿದ ಪ್ರಕರಣಗಳು ಸಹ ನಡೆದಿವೆ.



ಸಾಲವನ್ನು ಪಡೆಯುವ ವ್ಯಕ್ತಿ ಇನ್ಸ್ಟಂಟ್ ಪರ್ಸನಲ್ ಲೋನ್ ಆಪ್ ಗಳನ್ನು ಡೌನ್ ಲೋಡ್ ಮಾಡಿದಾಗ ಮೊಬೈಲ್ ನಲ್ಲಿ ಇರುವ ಕಾಂಟಾಕ್ಟ್ ನಂಬರ್ ಗಳು, ಫೋಟೋಗಳನ್ನು ಎಕ್ಸೆಸ್ ಮಾಡಲು ಪರ್ಮಿಷನ್ ನೀಡಬೇಕಾಗುತ್ತದೆ. ಸಾಲ ಪಡೆಯುವ ಸಂದರ್ಭದಲ್ಲಿ ಅಂದಾಜು 10 ಕಾಂಟಾಕ್ಟ್ ನಂಬರ್ ಗಳನ್ನು ರೆಫರೆನ್ಸ್ ಆಗಿ ನೀಡಬೇಕಾಗುತ್ತದೆ. ಸಾಲು ನೀಡುವ ಸಂದರ್ಭದಲ್ಲಿ ಈ ಸಂಸ್ಥೆಗಳು ಬಾರೀ ಮೊತ್ತದ ಪ್ರೋಸೆಸಿಂಗ್ ಚಾರ್ಜ್ ಶುಲ್ಕ ಕಡಿತ ಮಾಡುವ ಜೊತೆಗೆ ದೊಡ್ಡ ಮೊತ್ತದ ಬಡ್ಡಿಯನ್ನು ವಿಧಿಸಿ ಸಾಲವನ್ನು ನೀಡುತ್ತವೆ. 


Instant personal loan apps :  ಸಾಲ ಮರುಪಾವತಿಯನ್ನು ನಿಗದಿತ ಸಮಯದಲ್ಲಿ ಮಾಡದೆ ಹೋದಲ್ಲಿ, ಈ ಆಪ್ ಗಳು ಅನೈತಿಕ ದಾರಿಯನ್ನು ಹಿಡಿಯುತ್ತವೆ. ರೆಫರೆನ್ಸ್ ನೀಡಲಾದ ಕಾಂಟ್ಯಾಕ್ಟ್ ನಂಬರ್ ಗಳಿಗೆ ನೋಟಿಸ್ ಕಳಿಸುವ ಫೋನ್ ಮಾಡಿ ಬೆದರಿಕೆ ಹಾಕುವ ಕೆಲಸವನ್ನು ಮಾಡುತ್ತವೆ. ಫೋನ್ನಲ್ಲಿ ಇರುವ ಫೋಟೋಗಳನ್ನು, ಕಾಂಟಾಕ್ಟ್ ನಂಬರ್ ಗಳನ್ನು ಮಿಸ್ ಯೂಸ್ ಮಾಡುವ ಕೆಲಸಕ್ಕೆ ಕೈ ಹಾಕುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುವ ಕೆಲಸಕ್ಕೆ ಕೈ ಹಾಕುತ್ತವೆ. ಈ ಆಪ್ ಗಳ ಕಿರುಕುಳದಿಂದ ಹಲವರು ಒತ್ತಡವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿರುವ ಪ್ರಕರಣಗಳು ಕೂಡಾ ವರದಿ ಆಗಿವೆ.


ಋಣಾತ್ಮಕ ಅಂಶಗಳು 

ಈ ರೀತಿ ಸಾಲ ನೀಡುವ ಆ್ಯಪ್ ಗಳು ರಿಪೇಮೆಂಟ್ ಹಿಸ್ಟರಿಯ ಬಗ್ಗೆ ವೆರಿಫಿಕೇಶನ್ ಮಾಡುವುದಿಲ್ಲ. ಇವುಗಳು ಅನ್ ಸೆಕ್ಯೂರ್ಡ್ ವೆಬ್ಸೈಟ್ ಗಳನ್ನು ಹೊಂದಿರುತ್ತವೆ. ಸಾಲ ನೀಡುವ ಆಪ್ ತನ್ನ ವಿಳಾಸವನ್ನು ನೀಡುವುದಿಲ್ಲ. ಸಾಲ ನಡೆದ ಮತಕ್ಕೆ ಹಿಡನ್ ಚಾರ್ಜ್ ಅನ್ನು ಮಾಡುತ್ತದೆ. ಇವೆಲ್ಲ ಋಣಾತ್ಮಕ ಅಂಶಗಳಾಗಿವೆ.



ಮುಂಜಾಗರೂಕತೆ ವಹಿಸಿ

ಸಾಲ ತೆಗೆದುಕೊಳ್ಳುವ ಮುನ್ನ ಸಾಲ ನೀಡುವವರ ಕಾಂಟಾಕ್ಟ್ ನಂಬರ್, ಇಮೇಲ್ ಅಡ್ರೆಸ್, ವಿಳಾಸವನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯ. 


ಇದರ ಜೊತೆಗೆ ಗ್ರಾಹಕರು ಸಾಲ ನೀಡುತ್ತಿರುವ ಸಂಸ್ಥೆಯ ಬಗ್ಗೆ ನೀಡಿರುವ ಆನ್ ಲೈನ್ ರಿವ್ಯೂಗಳನ್ನು ಪರಿಶೀಲನೆ ಮಾಡಬೇಕು. ಆನ್ಲೈನ್ ಮೂಲಕ ಈ ಸಂಸ್ಥೆಗಳು ಸಾಲ ನೀಡುವುದಾದರೆ ಅವುಗಳು ಆರ್‌ಬಿಐ ನೀಡುವ mobile only non banking financial company (NBFC) license ಹೊಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಸಾಲ ಪಡೆಯುವ ಬಗ್ಗೆ ಆಲೋಚನೆ ಮಾಡಬಹುದು.


ಇನ್ಸ್ಟಂಟ್ ಆನ್ ಲೈನ್ ಲೋನ್ ಆ್ಯಪ್ ಗಳಿಂದ ಸಾಲ ಪಡೆಯುವ ಮುನ್ನ ಸಾಕಷ್ಟು ಎಚ್ಚರಿಕೆವಹಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು, ಬಂಧು ಬಳಗದ ಜೊತೆಗೆ ಹಂಚಿಕೊಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)