ಭಾರತದ ಶ್ರೀಮಂತ ನಟ ಇವರು! ಕಿಂಗ್ ಖಾನ್ ಆಸ್ತಿ ವಿವರ ನಿಮ್ಮನ್ನು ದಂಗು ಬಡಿಸುತ್ತದೆ!!

Finance Minister
0

Author : Arun Killuru 

ಸಿನಿಮಾ ರಂಗ ದೊಡ್ಡ ಮಟ್ಟದ ಶ್ರೀಮಂತರನ್ನು ಸೃಷ್ಟಿಸುವ ಕ್ಷೇತ್ರ. ಅದೃಷ್ಟ ಇರುವ ಕಲಾವಿದರು ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಾರೆ. ಹೀಗೆ ಕೋಟಿಗಳ ಲೆಕ್ಕಾಚಾರದಲ್ಲಿ ಸಂಭಾವನೆ ಪಡೆಯುವ ನಟ ನಟಿಯರಲ್ಲಿ ಯಾರು ಶ್ರೀಮಂತರು ಎನ್ನುವ ಪ್ರಶ್ನೆ ನಮ್ಮನ್ನು ಕಾಡಿರುತ್ತದೆ. ಇದಕ್ಕೆ ಉತ್ತರವಾಗಿ ಭಾರತದ ಶ್ರೀಮಂತ ನಟ ಯಾರು ? ಅವರ ಆಸ್ತಿ ಮೌಲ್ಯ ಎಷ್ಟು ಎನ್ನುವ ಪ್ರಶ್ನೆಗೆ  ಉತ್ತರಿಸುವ ಯತ್ನವನ್ನು ಮಾಡಿದ್ದೇವೆ.



ಭಾರತದ ಶ್ರೀಮಂತ ನಟ ಯಾರು ಎನ್ನುವುದನ್ನು ನೋಡಿದರೆ ಅದಕ್ಕೆ ಉತ್ತರ ಬಾಲಿವುಡ್ ನಟ, ಕಿಂಗ್ ಖಾನ್ ಎಂದೇ ಪ್ರಸಿದ್ಧ ಆಗಿರುವ ಶಾರುಖ್ ಖಾನ್! ಅವರ ಒಟ್ಟು ಆಸ್ತಿ ಮೌಲ್ಯ 770 ಮಿಲಿಯನ್ ಡಾಲರ್ ಅಥವಾ 6,142 ಕೋಟಿ ರೂಪಾಯಿ ಆಗಿದೆ. ಶಾರುಖ್ ಖಾನ್ ಭಾರತದ ಶ್ರೀಮಂತ ನಟ ಎನ್ನುವ ಜೊತೆಗೆ ವಿಶ್ವದ ಮೂರನೇ ಅತೀ ಶ್ರೀಮಂತ ನಟ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.

ಅಮೆರಿಕದ ನಟ Jerry Seinfeld, Tyler Perry 1 billion dollar ಆಸ್ತಿಯನ್ನು ಹೊಂದಿದ್ದಾರೆ. ಇದೇ ವೇಳೆ Dwayne Johnson 800 million dollar ಆಸ್ತಿ ಹೊಂದಿದ್ದಾರೆ.

ಶಾರುಖ್ ಖಾನ್ ಅವರು ಮೂರನೇ ಸ್ಥಾನದಲ್ಲಿ 770 million dollar ಮೌಲ್ಯದ ಆಸ್ತಿ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ Tom cruise 620 Million dollar, Jackie Chan 520 million dollar, George Clooney, Robert De Niro ತಲಾ 500 million dollar ಸಂಪತ್ತು ಹೊಂದಿದ್ದಾರೆ.


Watch Video: 


2023ರ ಆಸ್ತಿ 770 ಮಿಲಿಯನ್ ಡಾಲರ್ !

57 ವರ್ಷದ ಶಾರುಖ್ ಖಾನ್ ಅವರು ಇದುವರೆಗೆ 80ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ದೇಶಗಳಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಇದ್ದಾರೆ. ಶಾರುಖ್ ಖಾನ್ ಅವರು ವಾರ್ಷಿಕವಾಗಿ 38 ಮಿಲಿಯನ್ ಡಾಲರ್ ಗಳನ್ನು ಸಂಪಾದನೆ ಮಾಡುತ್ತಾರೆ ಎಂದು ಹೇಳಲಾಗಿದೆ. 

Read this: MRF ಭಾರತದ ದುಬಾರಿ ಸ್ಟಾಕ್ ಆಗಿದ್ದು ಹೇಗೆ? - Finance Minister 

ಚಿತ್ರ ಒಂದಕ್ಕೆ ಶಾರುಖ್ ಖಾನ್ ಸುಮಾರು 120 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಜಾಹೀರಾತುಗಳ ಮೂಲಕ ವಾರ್ಷಿಕವಾಗಿ 5ರಿಂದ 10 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.



ಟೆಲಿವಿಷನ್  ಶೋಗಳು, ಅವಾರ್ಡ್ ಶೋ ಗಳ ಹೋಸ್ಟ್ ಆಗಿ ಶಾರುಖ್ ಖಾನ್ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಇವರು ರೆಡ್ ಚಿಲ್ಲಿಸ್ ಎಂಟ ರ್ಟೈನ್ಮೆಂಟ್ ಪ್ರೊಡಕ್ಷನ್ ಕಂಪೇನಿಯ ಸಹ ಅಧ್ಯಕ್ಷ ಕೂಡಾ ಆಗಿದ್ದಾರೆ.  ಇಂಡಿಯನ್ ಪ್ರೀಮಿಯರ್ ಲೀಗಿನ ಕೊಲ್ಕತ್ತಾ ನೈಟ್ ರೈಡರ್ಸ್, ಕೆರೆಬಿಯನ್ ಪ್ರೇಮಿಯರ್ ಲೀಗ್ ನ ಟ್ರಿಂಬಾಗೋ ನೈಟ್ ರೈಡರ್ಸ್ ಇದರ ಕೋ ಓನರ್ ಸಹ ಆಗಿದ್ದಾರೆ.

ದೆಹಲಿಯಲ್ಲಿ ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಜನಿಸಿದ ಶಾರುಖ್ ಖಾನ್ ಅವರು ಕ್ರೀಡೆಯಲ್ಲಿ ಸಾಧನೆ ಮಾಡುವ ಆಸಕ್ತಿಯನ್ನು ಹೊಂದಿದ್ದರು. ಆದರೆ ಭುಜದ ಗಾಯದಿಂದಾಗಿ ಅವರಿಗೆ ಕ್ರೀಡೆಯಲ್ಲಿ ಮುಂದುವರೆಯಲು ಆಗಲಿಲ್ಲ. ದೆಹಲಿ ಯೂನಿವರ್ಸಿಟಿಯಲ್ಲಿ ಎಕನಾಮಿಕ್ಸ್ ನಲ್ಲಿ ಪದವಿ ಪಡೆದ ಶಾರುಖ್ ಖಾನ್ ಬಳಿಕ ಪೂರ್ಣ ಪ್ರಮಾಣದಲ್ಲಿ ನಟ ಆಗುವ ದೃಷ್ಟಿಯಿಂದ ಮುಂಬೈಗೆ ತೆರಳಿದರು.



ಸರ್ಕಸ್, ಈಡಿಯಟ್, ಉಮೀದ್ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ ಶಾರುಖ್ ಖಾನ್ ದಿವಾನ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಅತ್ಯುತ್ತಮ debut ಪ್ರಶಸ್ತಿ ಪಡೆದ ಅವರು ಮುಂದೆ ಬಾಜಿಗರ್, ಕರಣ್ ಅರ್ಜುನ್, ಎಸ್ ಬಾಸ್, ದಿಲ್ ತೋ ಪಾಗಲ್ ಹೈ ಮೊದಲಾದ ಚಿತ್ರದ ಮೂಲಕ ಅತಿ ಹೆಚ್ಚು ಹಣ ಬಾಚುವ ಹೀರೋ ಎನಿಸಿದರು. ಈ ವರ್ಷ ಶಾರುಖ್ ನಟನೆಯ ಪಠಾನ್ ಚಿತ್ರ ಬಿಡುಗಡೆ ಆಗಲಿದೆ.

ಶಾರುಖ್ ಖಾನ್ ಮನೆಗಳು ಮೌಲ್ಯ ಕೆಲವು ಕೋಟಿ!

ಶಾರುಖಾನ್ ಮುಂಬೈಯಲ್ಲಿ ಹೊಂದಿರುವ ಮನ್ನತ್ ಮನೆ 200 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. ಆರು ಮಹಡಿಯ ಈ ಮನೆ ಐದು ಬೆಡ್ರೂಮ್ ಗಳು, ಜಿಮ್, ಸ್ವಿಮ್ಮಿಂಗ್ ಪೂಲ್, ಖಾಸಗಿ ಮೂವಿ ಥಿಯೇಟರ್ ಹೊಂದಿದೆ.



ದುಬೈಯಲ್ಲಿ ಶಾರುಖ್ ಖಾನ್ ಅವರು ಜನ್ನತ್ ಹೆಸರಿನ 18 ಕೋಟಿ ರೂಪಾಯಿ ಬೆಲೆಯ ಮನೆಯನ್ನು ಹೊಂದಿದ್ದಾರೆ. ಇಲ್ಲಿ ಎಲ್ಲಾ ರೀತಿಯ ಆಧುನಿಕ ಸೌಕರ್ಯಗಳು ಇವೆ.

ಇದಲ್ಲದೆ ಶಾರುಖ್ ಖಾನ್ ಅವರು ಆಲಿಬಾಗ್ ನಲ್ಲಿ ಹಾಲಿಡೇ ಹೋಂ, ದೆಹಲಿಯಲ್ಲಿ ಐಷಾರಾಮಿ ಮನೆ, ಇಂಗ್ಲೆಂಡ್ನಲ್ಲಿ ವೆಕೇಷನ್ ಹೋಂ ಹೊಂದಿದ್ದಾರೆ.



ಶಾರುಖ್ ಖಾನ್ ಅವರ ಬಳಿ ವಿಶ್ವದ ದುಬಾರಿ ಕಾರುಗಳಿವೆ. Bugatti Veyron, rolls Royce Phantom coupe, bmw, audi, land rover range rover sport, Toyota land cruiser, Mitsubishi Pajero ಮೊದಲಾದ ಐಷಾರಾಮಿ ಕಾರುಗಳು ಅವರ ಸಂಗ್ರಹದಲ್ಲಿವೆ.



ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರನ್ನು ಮದುವೆಯಾಗಿರುವ ಶಾರುಕ್ ಖಾನ್ ಅವರಿಗೆ ಮೂವರು ಮಕ್ಕಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)