MRF ಭಾರತದ ದುಬಾರಿ ಸ್ಟಾಕ್ ಆಗಿದ್ದು ಹೇಗೆ? - Finance Minister

Finance Minister
0

ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಎಂ ಆರ್ ಎಫ್ ಅಥವಾ ಮದ್ರಾಸ್ ರಬ್ಬರ್ ಫ್ಯಾಕ್ಟರಿ ಈ ವರ್ಷ ಶೇರು ಒಂದಕ್ಕೆ ಒಂದು ಲಕ್ಷ ರೂಪಾಯಿಗಳನ್ನು ತಲುಪುವ ಮೂಲಕ ದಾಖಲೆಯನ್ನು ಬರೆಯಿತು. ವಾಹನಗಳ ಟೈರ್ ತಯಾರಿ ಮಾಡುವ MRF ದೊಡ್ಡದ ಮತ್ತದ ಶೇರಾಗಿ ರೂಪುಗೊಂಡ ಬಗೆ ಬಹಳ ರೋಚಕವಾಗಿದೆ.


1946 ರಲ್ಲಿ KM Mammen Mappillai ಎನ್ನುವವರು ಮದ್ರಾಸ್ ನಲ್ಲಿ ಎಂ ಆರ್ ಎಫ್ ಅನ್ನು ಆಟದ ಬಲೂನು ತಯಾರಿಸುವ ಕಾರ್ಖಾನೆಯಾಗಿ ಆರಂಭ ಮಾಡಿದರು. ಆರು ವರ್ಷದ ಬಳಿಕ ಟ್ರೆಡ್ ರಬ್ಬರ್ ತಯಾರಿ ಮಾಡುವ ಉದ್ಯಮಕ್ಕೆ ಕೈ ಹಾಕಲಾಯಿತು. 1956 ರಲ್ಲಿ ಎಂ ಆರ್ ಎಫ್ ಭಾರತದ ಮಾರುಕಟ್ಟೆಯಲ್ಲಿ ಶೇಕಡ 50ರಷ್ಟು ಪಾಲನ್ನು ಟ್ರೇಡ್ ರಬ್ಬರ್  ತಯಾರಿಕೆಯಲ್ಲಿ  ಪಡೆಯುವ ಮೂಲಕ ಅಗ್ರ ಕಂಪನಿ ಆಗಿ ಗುರುತಿಸಿಕೊಂಡಿತು. 1961ರಲ್ಲಿ ವಾಹನಗಳ ಟೈರ್ ಬಿಡುಗಡೆ ಮಾಡಿದ ಎಂ ಆರ್ ಎಫ್ ಬಳಿಕ ಟೈರ್ ಉದ್ಯಮದಲ್ಲಿ ಮುಂಚೂಣಿಯ ಕಂಪೇನಿಯಾಗಿ ಗುರುತಿಸಿಕೊಂಡಿತು.

ಕಳೆದ ಹತ್ತು ವರ್ಷಗಳಲ್ಲಿ ಎಂ ಆರ್ ಎಫ್ ನ ಸೇಲ್ಸ್ ಬೆಳವಣಿಗೆ 9 ರಿಂದ 10 ಶೇಕಡದಷ್ಟು ಇದೆ. ಇದೆ ವೇಳೆ ಎಂ ಆರ್ ಎಫ್ ಷೇರು ಪ್ರತಿ ವರ್ಷ ಶೇಕಡ 22ರಷ್ಟು ಬೆಳವಣಿಗೆಯನ್ನು ಕಂಡಿದೆ.

ಮಾರುಕಟ್ಟೆಯಲ್ಲಿ ಇರುವ ಶೇರುಗಳ ಸಂಖ್ಯೆ ಬದಲಾವಣೆ ಆಗದೆ ಇದ್ದು, ಬಿಜಿನೆಸ್ ಉತ್ತಮವಾಗಿ ಬೆಳವಣಿಗೆ ಕಂಡಾಗ ಕಂಪೆನಿಯ ಮಾರ್ಕೆಟ್ ವ್ಯಾಲ್ಯೂ ಹೆಚ್ಚಾಗುತ್ತದೆ. ಅದರಿಂದ ಶೇರು ಬೆಲೆ ಗಣನೀಯವಾಗಿ ಹೆಚ್ಚುತ್ತಲೇ ಹೋಗುತ್ತದೆ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

ಎಂಆರ್‌ಎಫ್‌ನ price to earning ration ಗಣನೆಗೆ ತೆಗೆದುಕೊಂಡಾಗ ಇದು ಬಾಲಕೃಷ್ಣ ಇಂಡಸ್ಟ್ರೀಸ್ ಸೇರಿದಂತೆ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ದುಬಾರಿಯಾಗಿ ಕಾಣುತ್ತದೆ. ಇದರ ಷೇರು ಬೆಲೆ ಹೆಚ್ಚಾಗಿರುವ ಕಾರಣ ಇದು ರಿಟೇಲ್ ಇನ್ವೆಸ್ಟರ್ ಗಳಿಗೆ ತುಂಬಾ ದುಬಾರಿ ಎನಿಸಿದೆ. ಮಾರುಕಟ್ಟೆಯನ್ನು ಗಮನಿಸಿದಾಗ ಇದರ ಒಂದು ತಿಂಗಳ ಆವರೇಜ್ ವಾಲ್ಯೂಮ್ 9,000 ಶೇರುಗಳು ಆಗಿವೆ. ಮೊದಲ ಬಾರಿಗೆ ಒಂದು ಲಕ್ಷ ರೂಪಾಯಿ ಬೆಲೆಯನ್ನು ಷೇರು ದಾಟಿದಾಗ ಜೂನ್ 13ರಂದು ಎಂ ಆರ್ ಎಫ್ ನ ಒಟ್ಟು 12,000 ಶೇರುಗಳ ವಹಿವಾಟು ಕಂಡು ಬಂದಿದೆ.



ಎಂ ಆರ್ ಎಫ್ ದುಬಾರಿ ಯಾಕೆ? 

ಸಾಮಾನ್ಯವಾಗಿ ರಿಟೇಲ್ ಇನ್ವೆಸ್ಟರ್ ಗಳನ್ನು ತಮ್ಮ ಕಂಪನಿಗಳ ಶೇರುಗಳ ಕಡೆಗೆ ಸೆಲೆಯಲು ಸ್ಟಾಕ್ split ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಜನರು ಷೇರುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತದೆ. ಸಣ್ಣ ಮತದ ಶೇರುಗಳಲ್ಲಿ ಹೆಚ್ಚು ವೈವಾಟು ಇರುವ ಕಾರಣ ಇದು ಹೆಚ್ಚು ಲಿಕ್ವಿಡಿಟಿ ಹೊಂದಿರುತ್ತದೆ

ಎಂ ಆರ್ ಎಫ್ ಕಂಪೆನಿಯ ಇತಿಹಾಸವನ್ನು ನಾವು ಗಮನಿಸುವುದಾದರೆ ಈ ಸ್ಟಾಕ್ ಇಲ್ಲಿವರೆಗೆ split ಆಗಿಲ್ಲ. 1970 ಹಾಗೂ 1975ರಲ್ಲಿ MRF ಬೋನಸ್ ಶೇರ್ ಗಳನ್ನು 1:2, 3: 10 ರೂಪದಲ್ಲಿ ನೀಡಿತು. ಆನಂತರ ಯಾವುದೇ ಬೋನಸ್ ಶೇರ್ ಗಳನ್ನು ನೀಡಿಲ್ಲ. ಎಂ ಆರ್ ಎಫ್ ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಡಿವಿಡೆಂಟ್ ನೀಡುತ್ತಿದೆ. ನನ್ನ ಇತಿಹಾಸದಲ್ಲಿ ಇದು ಡಿವಿಡೆಂಟ್ ನೀಡಿರುವುದು ಬಹಳ ಕಡಿಮೆ. ಇದರಿಂದ ಸ್ಟಾಕ್ ದೈತ್ಯಾಕಾರವಾಗಿ ಬೆಳೆದಿದೆ.

Watch Video: 



MRF ಭವಿಷ್ಯ ಹೇಗಿದೆ?

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಎಂ ಆರ್ ಎಫ್ ನ ಆದಾಯದ ಮೂಲಗಳು ಡೈವರ್ಸಿಫೈ ಆಗಿವೆ. ಈ ಕಾರಣದಿಂದ ಆರ್ಥಿಕತೆ ನಿಧಾನಗತಿ ಆದರೂ ಎಂ ಆರ್ ಎಫ್ ಗೆ ಅದು ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ.

MRF ಕಡಿಮೆ ವೆಚ್ಚಕ್ಕೆ ಕ್ರಮ ವಹಿಸಿರುವುದು, ಕಚ್ಚಾ ವಸ್ತುವಾದ ತೈಲ , ರಬ್ಬರ್ ಬೆಲೆ ಕಡಿಮೆ ಇರುವ ಕಾರಣ ಮುಂದಿನ ದಿನಗಳಲ್ಲಿಯೂ ಎಂ ಆರ್ ಎಫ್ ಶೇಕಡಾ 14ರಷ್ಟು ಲಾಭ ಕಾಣುವ ನಿರೀಕ್ಷೆ ಹೊಂದಲಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಎಂ ಆರ್ ಎಫ್  1 ಲಕ್ಷ ದಷ್ಟು ಹೆಚ್ಚು ಬೆಲೆಯ ಷೇರು ಆಗಿ ಬೆಳೆಯುತ್ತಿರುವುದರ ಹಿಂದೆ ಹೆಚ್ಚಿನ ಆದಾಯ ಗಳಿಕೆ ಹಾಗೂ ಭವಿಷ್ಯದ ಬೆಳವಣಿಗೆಯ ಭರವಸೆ ಕಾರಣ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)